ಮರೆಯಾದ ಬಯಲುಸೀಮೆಯ ಸುಬ್ಬುಲಕ್ಷ್ಮಿ ಸಿರಿಯಜಿ

‘ಜಾನಪದ ಕೋಗಿಲೆ’ ಎಂದೇ ಖ್ಯಾತರಾಗಿದ್ದ, ಬಯಲು ಸೀಮೆಯ ಸುಬ್ಬುಲಕ್ಷ್ಮಿ, ಕನ್ನಡ ಜಾನಪದ ಲೋಕದ  ಹಿರಿಯ ಗಾಯಕಿ ಚಳ್ಳಕೆರೆಯ ಸಿರಿಯಜ್ಜಿ ಇನ್ನಿಲ್ಲ. ಹಲವು ದಶಕಗಳ ಕಾಲ ಜಾನಪದ ಜಗತ್ತಿನ ಅನಭಿಷಕ್ತ ಸಾಮ್ರಾಜ್ಙಿಯಾಗಿ, ತೆರೆಯ ಮರೆಯಲ್ಲಿಯೇ ಬದುಕಿ ಮಾಯವಾದ ಮಧುರ ಕಂಠದ ನಾಡೋಜ ಸಿರಿಯಜ್ಜಿಗೆ ನುಡಿ ನಮನ

ಇದು ಎಂಬಿ, ಜಿಬಿ ಮೆಮೊರಿ ಕಾಲ. ಹನ್ನೆರಡಾರಲಿ ಎಷ್ಟು ಎಂಬುದು ಥಟ್ಟಂತ ಹೊಳೆಯುವುದಿಲ್ಲ. ನಾಲ್ಕು ಮಂದಿ ಸ್ನೇಹಿತರ ಮೊಬೈಲ್ ನಂಬರ್ ಕೇಳಿದರೆ, ಎರಡನ್ನು ತಡವರಿಸುತ್ತಾ ಹೇಳಿ, ಮೂರನೆಯದ್ದಕ್ಕೆ ಮೊಬೈಲ್ನಲ್ಲಿ ಹುಡುಕುವವರ ಕಾಲವಿದು. ಇಂಥವರ ನಡುವೆ ಸಾವಿರಾರು ಪದ್ಯಗಳನ್ನು ತಡವರಿಸದೆ, ನಿರರ್ಗಳವಾಗಿ ಹಾಡುವವರಿದ್ದಾರೆ. ಅಂಥ ಒಂದು ಅಚ್ಚರಿ ಪ್ರತಿಭೆ, ಮೌಖಿಕ ಪರಂಪರೆಯ ದನಿ ನಮ್ಮೂರಲ್ಲಿದೆ. ಅದು ಜಾನಪದ ಸಿರಿ. ಹೆಸರು ಸಿರಿಯಜ್ಜಿ!

siriyajji

ಹೆಸರಿನಲ್ಲೇ ಸಿರಿ ಇದೆ. ಅದು ಜಾನಪದ ಸಿರಿ. ನಮ್ಮೊಡನೇ ಇರುವ ಮೌಖಿಕ ಪರಂಪರೆಯ ದನಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿ ಯಾರಿಗೆ ಗೊತ್ತಿದೆ? ಇಂಥ ಅಜ್ಞಾತವೆನ್ನಬಹುದಾದ ಹಳ್ಳಿಯಲ್ಲಿ ಹುಟ್ಟಿದಾಕೆ ಸಿರಿಯಜ್ಜಿ. ಯಾವಾಗ ಹುಟ್ಟಿದ್ದೋ ಆಕೆಗೆ ಅದು ತಿಳಿಯದು. ಯಾವುದಾದರೂ ಒಂದು ಹಬ್ಬದ ಹಿಂದು ಮುಂದು, ಹುಣ್ಣಿಯ ಆಚೀಚೆ ಎಂದು ನೆನಪಿಸಿ ಕೊಂಡೂ ಹೇಳಲಾರಳು.
ಆದರೆ ಆಕೆ ದನಿ ಎತ್ತಿದರೆ ಸಾವಿರಾರು ಹಾಡುಗಳು ಅನುರಣಿಸುತ್ತವೆ. ಗೊಲ್ಲರಹಟ್ಟಿಯಲ್ಲಷ್ಟೇ ಅಲ್ಲ, ಜಾನಪದ ಜಗತ್ತಿನ ತುಂಬಾ. ಅಕ್ಕಿ ಆರಿಸುವಾಗ, ಸುಗ್ಗಿ ಹಬ್ಬದಲ್ಲಿ, ಊರ ದೇವತೆಯ ಜಾತ್ರೆಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಜೋಗುಳ ಹಾಡುತ್ತಾ ಎಲ್ಲಾ ಸಂತಸದ, ಸಮಾಧಾನದ ಗಳಿಗೆಗೂ ಹಾಡುತ್ತಾ ಹಾಡುಗಳ ಸಾಮ್ರಾಜ್ಞಿ ಎನಿಸಿಕೊಂಡಾಕೆ ಈ ಸಿರಿಯಜ್ಜಿ.
ಎಲ್ಲಿ ಕಲಿತೆ? ಎಂದು ಕೇಳಿದ್ದೆವು
ಆಕೆ ಬಿಚ್ಚಿಟ್ಟಿದ್ದು ತನ್ನ ಹಿಂದಿದ್ದ ಮೌಖಿಕ ಸಂಸ್ಕೃತಿಯೊಂದರ ಕಥೆ. ಅದರ ಭಾಗವಾಗಿದ್ದ ತನ್ನಂತೆ ತಮ್ಮ ನಿತ್ಯದ ಬದುಕನ್ನು ಹಾಡುತ್ತಾ ಕಳೆದ ತನ್ನ ತಾಯಿ, ಅಜ್ಜಿಯರ, ತನ್ನೊಂದಿಗೆ ದನಿಗೂಡಿಸಿದ್ದ ಗೆಳತಿಯರ ಕಥೆ.
ಕುರಿ ಕಾಯುತ್ತಾ, ಮನೆಯ ಕೆಲಸ ಗಳನ್ನು ಮಾಡುತ್ತಾ, ತಾವೇ ಕಟ್ಟಿದ ಪದಗಳನ್ನು ಹಾಡಿದರು. ಮನೆಯಲ್ಲಿ ಹುಟ್ಟಿದ ಮಗುವಿನ ಸಂಭ್ರಮ, ಗಂಡನಿಲ್ಲದ ಬೇಸರದ ನೋವು ಎಲ್ಲವೂ ಅಲ್ಲಿ ಪದಗಳಾದವು. ಕಾಯುವ ದೇವರ ಆರಾಧಿಸಿದರು.
ಸಿರಿಯಜ್ಜಿ ಇಂಥ ಸಾವಿರ ಪದಗಳನ್ನು ಹಾಡುತ್ತಲೇ ಬಂದರು ಎಂಬುದು ಜಿಬಿ ಮೆಮೊರಿ ಕುರಿತು ಮಾತನಾಡುವ ನಮ್ಮ ಕಾಲಕ್ಕೆ ನಿಜಕ್ಕೂ ಅಚ್ಚರಿ.

April 2, 2009 at 12:58 pm 1 comment

ಗದುಗಿನ ಪಕ್ಷಿಕಾಶಿ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆ – ವಿದೇಶಿ ಹಕ್ಕಿಗಳ ಮೆಚ್ಚಿನ ವಲಸೆ ತಾಣ. ಚಳಿಗಾಲಕ್ಕೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಬಣ್ಣ ಬಣ್ಣದ ಸಹಸ್ರಾರು ಬಾನಾಡಿಗಳು ಸ್ವಚ್ಛಂಧವಾಗಿ ವಿಹರಿಸುತ್ತ ವರ್ಣರಂಜಿತ ಪಕ್ಷಿ ಲೋಕವನ್ನೇ ಸೃಷ್ಟಿಸುತ್ತವೆ. ಗದುಗಿನ ವಾತರ್ಾ ಇಲಾಖೆಯ ಸಹಾಯಕ ನಿದರ್ೇಶಕರಾಗಿರುವ ಪಿ. ಎಸ್. ಪರ್ವತಿಯವರಿಂದ ಗದಗ ಜಿಲ್ಲೆಯ ಪಕ್ಷಿಕಾಶಿಯ ಪರಿಚಯ.

Ducksಪ್ರತಿ ವರ್ಷದ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ . ಸ್ಥಳೀಯ ಗ್ರಾಮದ ಜನರಿಗೆ ಅಪ್ಯಾಯಮಾನ ಅನುಭವ ನೀಡುವ ಈ ಬಾನಾಡಿಗಳು, ಆಕರ್ಷಕ ಪಕ್ಷಿಧಾಮವನ್ನೇ ರಚಿಸುತ್ತವೆ. ಹಲವಾರು ಪ್ರಬೇಧಗಳ ಈ ಹಕ್ಕಿಗಳ ಆಶ್ರಯ ತಾಣದಿಂದಾಗಿ ಜಿಲ್ಲೆಯ ಈ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ರೂಪಗೊಂಡಿದೆ. ಗದಗದಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ 26 ಕಿ. ಮಿ. ಸಂಚರಿಸಿದರೆ ಮಾಗಡಿ ಗ್ರಾಮ ದೊರೆಯುತ್ತದೆ . ತಾಲೂಕು ಕೇಂದ್ರವಾದ ಶಿರಹಟ್ಟಿಯಿಂದ ಕೇವಲ 8 ಕಿ. ಮಿ.  ಹಾಗೂ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಿಂದ 11 ಕಿ. ಮಿ. ಪಯಣಿಸಿದರೆ ಮಾಗಡಿ ಕೆರೆ ದೊರೆಯುತ್ತದೆ . ಈ ಕೆರೆಯ ಒಟ್ಟು ವಿಸ್ತೀರ್ಣ 134. 15 ಎಕರೆ. ಮಾಗಡಿ ಹಾಗೂ ಹೊಳಲಾಪುರ ಗ್ರಾಮದಲ್ಲಿ ಮೈಚಾಚಿದ ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ .
ದೂರದ ಜಮ್ಮು – ಕಾಶ್ಮಿರ್, ಲಡಾಕ್, ಟಿಬೇಟ್ , ಮಲೇಷಿಯಾ, ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ, ಆಸ್ಟ್ರಿಯಾ, ನೇಪಾಳ, ಬಾಂಗ್ಲಾ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಈ ಬಾನಾಡಿಗಳು ಈ ಕೆರೆಯಲ್ಲಿ  ಐದಾರು ತಿಂಗಳು ನೆಲೆಯೂರಿ ನಂತರ ಪುನಃ ತಮ್ಮ ತವರಿಗೆ ತೆರಳುತ್ತವೆ . ಪಕ್ಷಿ ತಜ್ಞರ ಪ್ರಕಾರ ಇಂತಹ ಪಕ್ಷಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಹೆಪ್ಪುಗಟ್ಟುವಂತಹ  ಶೀತದಿಂದಾಗಿ ಇವುಗಳು ವಲಸೆ ಹೊರಟು ಉಷ್ಣ ಪ್ರದೇಶಗಳತ್ತ ಪಯಣಿಸುತ್ತವಂತೆ ತಮ್ಮ ಪ್ರವಾಸ ಕಾಲದಲ್ಲಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ಅಲ್ಲಿ ಕೆಲ ಕಾಲ ಇದ್ದು ಮರಳಿ ಮಾಚರ್್ ಹೊತ್ತಿಗೆ ತಮ್ಮ ಗೂಡಿಗೆ ಸೇರುತ್ತವೆ . ಹೀಗೆ ಇವುಗಳು ಆಯ್ದುಕೊಂಡ ಸಮಶೀತೋಷ್ಣ ಸ್ಥಳವೇ ಮಾಗಡಿ ಕೆರೆ.

ನಮ್ಮ ದೇಶದ ಬಾತುಕೋಳಿಗಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರುವ ಈ ಪಕ್ಷಿಗಳ ಒಡನಾಟದಿಂದ ಮಾಗಡಿ ಕೆರೆ ಕಂಗೋಳಿಸುತ್ತದೆ . ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ ಅತಿಥಿಗಳಾಗಿ ಆಗಮಿಸಿವೆ. ಇಲ್ಲಿಗೆ ವಲಸೆ ಬರುವ ಈ ವೈವಿಧ್ಯಮಯ ಪಕ್ಷಿಗಳ ಪ್ರಬೇಧ ಸಹ ಸಾಕಷ್ಟಿದೆ . ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಾಂತ್ಯಕ್ಕೆ ಇಲ್ಲಿಗೆ 130 ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಲಸೆ ಬರುವದಾಗಿ ಗುರುತಿಸಲಾಗಿದೆ. ಅವುಗಳಲ್ಲಿ 16 ಪ್ರಬೇಧದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಆಪೈಕಿ ಗೀರು ತಲೆಯ ಬಾತುಕೋಳಿಗಳು (ಬಾರ್ ಹೆಡೆಡ್ ಗೂಸ್) ಪಕ್ಷಿಗಳ ಸಂಖ್ಯೆ ಅಧಿಕವಾಗಿದ್ದು, ನಂತರದ ಸ್ಥಾನಗಳಲ್ಲಿ ಬ್ರಾಹ್ಮಿಣಿ ಡಕ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾಕರ್್ ಹಾಗೂ ಸ್ಪೂನ್ ಬಿಲ್ ಜಾತಿಯ ಹಕ್ಕಿಗಳು ಈ ಕೆರೆಯನ್ನು ಆಶ್ರಯಿಸುತ್ತವೆ. ನಾವು ಕಾಣದ ಕೇಳದ ನಾರ್ದನ್ ಶೆಲ್ವರ್, ಲಿಟ್ಲ್ ಕಾಪರ್ೋರಲ್ಸ್, ಅಟಲ್ರಿಂಗ್ ಪ್ಲೋವರ್, ಲೊಮನ್ ಡೇಲ್,  ವುಡ್ ಸ್ಟಾಂಡ್, ಪೈಪರ, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ, ರೆಡ್ ಢ್ರೋಟ್, ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬಂದಿರುವದನ್ನು ಗುರುತಿಸಲಾಗಿದೆ.
ಕೆರೆಯಲ್ಲಿ ವಾಸವಾಗಿರುವ ಈ ವಲಸೆ ಹಕ್ಕಿಗಳ ದೈನಂದಿನ ಚಟುವಟಿಕೆ ಬಹು ವಿಶಿಷ್ಟವಾದರು. ಪ್ರತಿದಿನ  ನಸುಕಿನ  ವೇಳೆಗೆ ಮೈದಡವಿಕೊಂಡು ಆಹಾರ ಅರಸುತ್ತ ಸುತ್ತಲಿನ ಪ್ರದೇಶಗಳತ್ತ ಸಾಕಷ್ಟು ದೂರ ಸಂಚರಿಸುವ ಈ ಪಕ್ಷಿಗಳು ಎಳೆ ಬಿಸಿಲು ಆರಂಭವಾಗುವ 8 ರಿಂದ 9 ಗಂಟೆ ಹೊತ್ತಿಗೆ ಕೆರೆ ಅಂಗಳಕ್ಕೆ ವಿಮಾನಗಳಂತೆ ಕಾಲಿಡುತ್ತವೆ. ಸಂಜೆಯವರೆಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿ, ವಿರಮಿಸುವ ಈ ಸಂಕುಲ , ಸಂಜೆ 6 ರ ಹೊತ್ತಿಗೆ ಪುನಃ ಆಹಾರ ಅರಸುತ್ತ ಮತ್ತೊಮ್ಮೆ ಹಾರಾಟ ಪ್ರಾರಂಭಿಸುತ್ತವೆ . ಒಕ್ಕಲಾದ ಹೊಲದಲ್ಲಿಯ ಅಳಿದುಳಿದ ಕಾಳು , ಕೆರೆಯಲ್ಲಿರುವ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಈ ಪಕ್ಷಿಗಳು ರಾತ್ರಿ ಕೆರೆಯಲ್ಲಿ ತಂಗುತ್ತವೆ. ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಬಾಸವಾಗುತ್ತದೆ . ಬಂಗಾರ ವರ್ಣದ ಬಾಹ್ಮಿಣಿ ಡಕ್, ಬೂದು ಕೆಂಪು ನೆರಳೆ, ಕಪ್ಪು ಬಣ್ಣದ ಕುತ್ತಿಗೆ ಕೊಕ್ಕರೆಗಳು, ಹೊಟ್ಟೆ ಭಾಗದಲ್ಲಿ ಬಿಳಿ ಹಾಗೂ ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಈ ಪಕ್ಷಿಗಳು ನೀರಲ್ಲಿ ಗಂಭೀರವಾಗಿ ಚಲಿಸುವದನ್ನು ಕಂಡಾಗ ಸ್ಮರಣೀಯ ಅನುಭವವಾಗುತ್ತದೆ .ಬರದ ಛಾಯೆಯಲ್ಲಿದ್ದ ಈ ಕೆರೆೆ ಅದೃಷ್ಟವಶಾತ್ ಬಂದ ಮಳೆಯಿಂದ ಮೈದಂಬಿ ನಿಂತಿದೆ. ಹೀಗಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿದಿರುವ ಈ ಹಕ್ಕಿಗಳು, ಪಕ್ಷಿ ಪ್ರಿಯರನ್ನು ಸೆಳೆಯುತ್ತಿವೆ . ಐದರಿಂದ ಹತ್ತು ಸಾವಿರದ ವರೆಗೂ ಬರುವ ಚಳಿಗಾಲದ ಈ ಖಾಯಂ ಅತಿಥಿಗಳಿಂದಾಗಿ ಮಾಗಡಿ ಕೆರೆ ಪಕ್ಷಿ ಧಾಮವಾಗಿ ರೂಪಗೊಂಡು ನಿಸರ್ಗ ಪ್ರೇಮಿಗಳನ್ನು , ಶಾಲಾ ಮಕ್ಕಳನ್ನು ಆರ್ಕಷಿಸುತ್ತದೆ . ಮಾಗಡಿ ಗ್ರಾಮದ ಪಕ್ಷಿ ಪ್ರಿಯ ಯುವಕರ ಪಡೆ ಸಂಘವೊಂದನ್ನು ಸ್ಥಾಪಿಸಿ ಪಕ್ಷಿಗಳ ರಕ್ಷಣೆಗೆ ಮುಂದಾಗಿದೆ. ಈ ಕೆರೆಯನ್ನು ಅಧಿಕೃತ ಪಕ್ಷಿ ಧಾಮವನ್ನಾಗಿ ಘೋಷಿಸಿ ಪಕ್ಷಿ ಸಂರಕ್ಷಣೆಗೆ ಪೂರಕ ವಾತಾವರಣ ಕಲ್ಪಿಸಬೇಕೆಂಬುದು ಅವರ ಬೇಡಿಕೆಯಾಗಿದೆ.
ಕೇಂದ್ರ ಸಕರ್ಾರ ಈ ಕೆರೆ ಅಭಿವೃಧ್ಧಿಗಾಗಿ ಅರಣ್ಯ ಇಲಾಖೆಯ ಯೋಜನೆಗೆ ಒಪ್ಪಿಗೆ ಸೂಚಿಸಿ, 66.35 ಲಕ್ಷ ರೂ. ಗಳನ್ನು ಕೆರೆ ಪ್ರದೇಶಾಭಿವೃಧ್ಧಿಗಾಗಿ ಮಂಜೂರಾತಿ ನೀಡಿದೆ. ಕೆರೆಯ ಸಂರಕ್ಷಣೆ ಹಾಗೂ ನಿರ್ವಹಣೆಗೆ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅದರ ಅನುಷ್ಠಾನಕ್ಕೆ ಇಲಾಖೆ ಮುಂದಾಗಿದೆ. ಕೆರೆಯ ಉದ್ದಕ್ಕೂ ಪಕ್ಷಿ ವೀಕ್ಷಕರಿಗೆ ಅನುಕೂಲವಾಗುವದಕ್ಕಾಗಿ ಬೇಲಿ ಹಾಕಿದ್ದು ಇದರಿಂದಾಗಿ ವಲಸೆ ಪಕ್ಷಿಗಳಿಗೆ ಸಂರಕ್ಷಣೆ ದೊರೆತ್ತಿದ್ದು ಅವು ಮುಕ್ತವಾಗಿ ಕೆರೆಯಲ್ಲಿ ವಿಹರಿಸಲು ಸಾಧ್ಯವಾಗಿದೆ. ಪಕ್ಷಿಗಳು ಹೆಚ್ಚಾಗಿರುವ ಸ್ಥಳದಲ್ಲಿ ವೀಕ್ಷಣಾ ಗೋಪುರ ನಿಮರ್ಿಸಲಾಗಿದ್ದು, ಪಕ್ಷಿಗಳ ಮಾಹಿತಿ ಫಲಕಹಾಕಿ, ವಿಶ್ರಾಂತಿ ತಾಣ (ಪರ ಗೋಲಾ) ನಿಮರ್ಿಸಿರುವುದು ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನಕೂಲವಾಗಿದೆ . ಅರಣ್ಯ ಇಲಾಖೆ ಪಕ್ಷಿಗಳ ನೆರವಿಗಾಗಿ 8 . 5 ಕಿ. ಮಿ. ಉದ್ದದ ಕೆರೆ ರಸ್ತೆ ಬದಿ ಸಾಲು ಮರ ಹಾಗೂ ಸಮೀಪದ ರೈತರ 156 ಹೆಕ್ಟೇರುಗಳಲ್ಲಿ  ನೆಡು ತೋಪು ಮುಂತಾದವುಗಳನ್ನು ಅಭಿವೃಧ್ಧಿಗೊಳಿಸಿದೆ. ಸಣ್ಣ ನೀರಾವರಿ ಇಲಾಖೆಯು ಕೆರೆ ಅಭಿವೃಧ್ಧಿಗೆ ಮುಂದಾಗಿದೆ.

March 23, 2009 at 2:10 pm 1 comment

ಹಾಡಿಯ ಮಕ್ಕಳ ಅಕ್ಷರ ಯಾತ್ರೆ

ದಟ್ಟಡವಿಯ ಮಧ್ಯೆ ಅಲ್ಲೊಂದು-ಇಲ್ಲೊಂದು ಹಾಡಿಗಳಲ್ಲಿ ಹಾಡುತ್ತಾ, ಆಡುತ್ತಾ ಕಳೆದುಹೋಗಬಹುದಾಗಿದ್ದ ಅಮೂಲ್ಯ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾಯಕ ಹೆಗ್ಗಡದೇವನಕೋಟೆಯ ಗೊಳೂರು ಹಾಡಿಯಲ್ಲಿ ಕೆಲ ವರ್ಷಗಳಿಂದ ಸದ್ದಿಲ್ಲದೆ ನಡೆದು ಬರುತ್ತಿದೆ. ದೈವ ದತ್ತವಾಗಿ ಬಂದ ಪ್ರಕೃತಿಯ ಅನುಕರಣಾ ಕೌಶಲ್ಯದ ಜೊತೆಗೆ ಬಾಹ್ಯ ಪ್ರಪಂಚದ ಆಗುಹೋಗುಗಳ ಬಗ್ಗೆಯೂ ಗಮನಹರಿಸತೊಡಗಿರುವ ಕಾಡಿನ ಮಕ್ಕಳ ಅಕ್ಷರ ಪ್ರಪಂಚದ ಬಗ್ಗೆ ಮೈಸೂರಿನ ವಾತರ್ಾ ಇಲಾಖೆಯ ಉಪನಿದರ್ೇಶಕರಾದಂತಹ ಎ ಆರ್ ಪ್ರಕಾಶ್ರವರು ಬೆಳಕು ಚೆಲ್ಲಿದ್ದಾರೆ.

A typical Hady

ಅರಣ್ಯದ ಮಧ್ಯೆ ಎಲ್ಲ ಶೈಕ್ಷಣಿಕ ಹಾಗೂ ಇತರೆ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಕಾಡಿನ ಕಿರು ಉತ್ಪನ್ನಗಳನ್ನೇ ಆಶ್ರಯಿಸಿ ಕಾಡಿನಲ್ಲೇ ಕಳೆದುಹೋಗಬಹುದಾಗಿದ್ದ 52 ಮಕ್ಕಳಿಗೆ ಇಲ್ಲಿ ಭವಿಷ್ಯದ ಬಗ್ಗೆ ಭರವಸೆಯಿದೆ. ಕಾಡಿನಿಂದ ಹೊರಬಂದು ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವ ಆಶಾಭಾವನೆ ಇದೆ.
ಹೆಚ್.ಡಿ. ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೊಳೂರು ಹಾಡಿ ಹಾಗೂ ಸುತ್ತಮುತ್ತಲ ಹಾಡಿಯ 52 ಮಕ್ಕಳು ಗೊಳೂರು ಹಾಡಿಯ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದರಿಂದ ಏಳನೇ ತರಗತಿಯವರೆಗಿನ ಮಕ್ಕಳು ಈ ಪೈಕಿ ಸೇರಿದ್ದಾರೆ. ಒಂದನೇ ತರಗತಿಯಲ್ಲಿ 10, ಎರಡನೇ ತರಗತಿಯಲ್ಲಿ 5, ಮೂರನೇ ತರಗತಿಯಲ್ಲಿ 6, ನಾಲ್ಕನೇ ತರಗತಿಯಲಲಿ 6, 5ನೇ ತರಗತಿಯಲ್ಲಿ 9 ಹೀಗೆ ಮಕ್ಕಳ ಸಂಖ್ಯೆ ಎರಡು ಅಂಕಿ ತಲಪುವುದೇ ಕಷ್ಟ.

Tribal's School
52 ಮಕ್ಕಳಿಗೆ ಪಾಠ ಹೇಳಲು 3 ಶಿಕ್ಷಕರು ಇದ್ದರೂ ಸ್ಥಳಾವಕಾಶದ ಕೊರತೆಯಿಂದ ಬೇರೆ ಬೇರೆ ತರಗತಿಗಳಿಗೆ ಸೇರಿದ ಎಲ್ಲ 52 ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಹೇಳಬೇಕಾದ ಅನಿವಾರ್ಯತೆ ಇದೆ. ಕೊಠಡಿ ನಿಮರ್ಾಣಕ್ಕೆ ಅರಣ್ಯದ ಕಾನೂನುಗಳು ಅಡಚಣೆಯಾದರೂ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರ ಉತ್ಸಾಹಕ್ಕೆ ಇದು ಅಡ್ಡಿಯಾಗಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರಿಗೂ ಭರವಸೆ ಇದೆ. 52 ಮಕ್ಕಳನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಿಕೊಂಡು ಆಯಾ ತರಗತಿಯ ಪಾಠ ಹೇಳಿಕೊಡಲಾಗುತ್ತದೆ.
ಕೊಳ್ಳೇಗಾಲ ತಾಲ್ಲೂಕಿನ ದೊಡ್ಡರಾಜು ಹಾಗೂ ನಂಜನಗೂಡು ತಾಲ್ಲೂಕಿನ ಹರೀಶ್ ಇಲ್ಲಿ ಶಿಕ್ಷಕರು. ಹಾಡಿಗೆ ಸಮೀಪದಲ್ಲೇ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡು ವಾಸಿಸುತ್ತಾ, ಪಟ್ಟಣದ ಕಡೆ ಮುಖ ಮಾಡದೆ ಹಾಡಿಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈರ್ವರ ಸೇವೆ ಶ್ಲಾಘನೀಯ. ಇವರ ಜತೆಗೆ ಮತೋರ್ವ ಶಿಕ್ಷಕರು ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಸಕರ್ಾರಿ ಉದ್ಯೋಗ ದೊರಕುವವರೆಗೆ ಎಲ್ಲಿಯಾದರೂ ಕೆಲಸ ಮಾಡಲು ಸಿದ್ದವೆಂದು ಹೇಳಿ, ನಂತರ ನಗರ ಪ್ರದೇಶಗಳಿಗೆ ವಗರ್ಾವಣೆ ಒತ್ತಡ ತರುವ ಸಕರ್ಾರಿ ನೌಕರರು ಇಂತಹವರಿಂದ ನಿಜಕ್ಕೂ ಪಾಠ ಕಲಿಯಬೇಕಾಗಿದೆ.

Primary School deep inside the forest
ಗಿರಿಜನರಲ್ಲಿ ಸಹಜವಾಗಿಯೇ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಗೆ ಇದೆ. ಗಂಡು ಮಕ್ಕಳ ವ್ಯಾಮೋಹ ಕಡಿಮೆ ಇರುವುದು ಹಾಗೂ ಹೆಣ್ಣು ಭ್ರೂಣ ಹತ್ಯೆಯ ದುರಾಲೋಚನೆ ಇಲ್ಲದಿರುವುದು ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿಗೆ ಇರುವುದಕ್ಕೆ ಮತ್ತೊಂದು ಕಾರಣವಾಗಿದೆ. 52 ಮಕ್ಕಳ ಪೈಕಿ 31 ಹೆಣ್ಣು ಮಕ್ಕಳು ಇದ್ದಾರೆ.
ಶಾಲೆ ಕಲಿಯುತ್ತಿರುವ ಬಹುತೇಕ ಮೊದಲ ತಲೆಮಾರಿನ ಈ ಮಕ್ಕಳ ಕಲಿಕೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ಈ ಮಕ್ಕಳನ್ನು ಸಜ್ಜುಗೊಳಿಸಲು ದೊಡ್ಡರಾಜು ಮತ್ತು ಹರೀಶ್ ಅವರಂತಹ ಶಿಕ್ಷಕರ ಉತ್ಸಾಹ, ತಮ್ಮ ದಿನನಿತ್ಯದ ತಾಪತ್ರಯದ ನಡುವೆಯೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪೋಷಕರ ಬೆಂಬಲ ಅಗತ್ಯವಾಗಿದೆ.
ಶಾಲೆ ಹಾಗೂ ಅಂಗನವಾಡಿ ಎನ್ನುವ ಮತ್ತೆರಡು ಕುಟೀರಗಳು ಇಲ್ಲಿ ಇಲ್ಲದಿದ್ದರೆ ಗಿರಿಜನರ ಮತ್ತೊಂದು ತಲೆಮಾರಿಗೆ ಅರಣ್ಯವೇ ಆಶ್ರಯವಾಗಬೇಕಾಗಿತ್ತು. ಆದರೆ ಇದೀಗ ಶಾಲೆ ಪಯರ್ಾಯ ಬದುಕು ಕಲ್ಪಿಸುವ ಭರವಸೆ ಮೂಡಿಸಿದೆ.
ಅರಣ್ಯದಿಂದ ಹೊರಬಂದು ಬದುಕು ಕಂಡುಕೊಳ್ಳಲು ಇಚ್ಚಿಸುವ ಪ್ರತಿ ಗಿರಿಜನ ಕುಟುಂಬಕ್ಕೆ 10 ಲಕ್ಷ ರೂ. ನೀಡಿ ಅವರ ಬದುಕಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇದೆ. ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷಣ, ಆರೋಗ್ಯ ಮತ್ತಿತರ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದರೂ, ಕಾಡಿನಲ್ಲೇ ಉಳಿಯಲು ಇಚ್ಚಿಸುವ ಗಿರಿಜನರಿಗೆ ಅವರು ಇರುವಲ್ಲೇ ಶಿಕ್ಷಣದ ಸೌಲಭ್ಯ ಒದಗಿಸುವ ಮೂಲಕ ಮುಂದಿನ ತಲೆಮಾರನ್ನಾದರೂ ಮುಖ್ಯ ವಾಹಿನಿಗೆ ತರುವ ಸಕರ್ಾರದ ಪ್ರಯತ್ನಕ್ಕೆ ಸಂಘಸಂಸ್ಥೆಗಳ ಬೆಂಬಲವೂ ಅಗತ್ಯವಾಗಿದೆ.

A routine life inside a Haady

ಚಿತ್ರಗಳು : ಎ ಕೃಷ್ಣೋಜಿರಾವ್

March 4, 2009 at 12:43 am Leave a comment

Slumdog Millionaire; ಸ್ಲಂ ಜಗತ್ತಿನ ಕುಸುಮಬಾಲೆ

ಸ್ಲಮ್ಡಾಗ್ ಮಿಲಿಯನೇರ್ ಬಗ್ಗೆ ಇದುವರೆವಿಗೂ ಮೂಡಿಬಂದಿರುವ ಪ್ರತಿಕ್ರಿಯೆಗಳು, ಅನಿಸಿಕೆಗಳು ಆ ಸಿನೆಮಾದಲ್ಲಿ ಚಚರ್ಿಸಬೇಕಾದ ಬಹುತೇಕ ಮಜಲುಗಳ ಬಗ್ಗೆ ಈಗಾಗಲೇ ವಿಸ್ತೃತವಾಗಿ ಚಚರ್ೆ ಮಾಡಿ ಮುಗಿಸಿಬಿಟ್ಟಿವೆಯಾದರು, ನನ್ನ ಅಭಿಪ್ರಾಯ ಅಳಿದುಳಿದ ಕೆಲವೇ ಕೆಲವು ಸಂಗತಿಗಳ ಬಗ್ಗೆ. ದೂರದ ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದ ಕಲಾಪಗಳ ವರದಿಗಾರಿಕೆಯ ತಲೆಬಿಸಿಯ ನಡುವೆಯೂ ನಾನು ಬಿಟ್ಟು ಬಿಡದೆ ನೋಡಿದ ಸಿನೆಮಾ. ಹಾಗಂದ ಮಾತ್ರಕ್ಕೆ ಇದು ಅತ್ಯತ್ತಮ ಸಿನೆಮಾ ಅಥವಾ classic ಎಂದೇನು ಅಲ್ಲ ಬದಲಿಗೆ Art for Art Sake  ಎನ್ನುವ ಥಿಯರಿಯ ನೆಲೆಯಲ್ಲಿ ನೋಡಿದಾಗ ಚಿತ್ರದ ಬಹುತೇಕ ಅಂಶಗಳು ಅದ್ಭುತವೆನಿಸುತ್ತವೆ.

dev-and-freida

 

ನಾವು ಬೆಳೆದುಬಂದ ಮನಸ್ಥಿತಿಯೋ ಅಥವಾ ನಮ್ಮಗಳ ಗುಣವೇ ಅಂಥದೋ ತಿಳಿಯದು. ಗಲೀಜು,  ಅಥವಾ ನೇತ್ಯಾತ್ಮಕವಾಗಿ ನಮ್ಮ ದೇಶವನ್ನು ಕಲ್ಪಿಸಿಕೊಳ್ಳಲಾಗದ ಮನಸ್ಥಿತಿ. ಬಹುಷಃ ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಬಹುತೇಕರಿಗೆ ಸ್ಲಮ್ಡಾಗ್ ಮಿಲಿಯನೇರ್ ಒಂದು ಭಾರತ ವಿರೋಧಿ ಚಿತ್ರ. ಆದರೆ ಅವನ್ನೆಲ್ಲ ಬದಿಗಿರಿಸಿ ಬರೀ ಸಿನೆಮಾ ಮಾಧ್ಯಮದ ಹಿನ್ನೆಲೆಯಲ್ಲಿ, ಸ್ಲಮ್ಡಾಗ್ ಮಿಲಿಯನೇರ್ ನಾವು ನೋಡದ ಭಾರತವೊಂದರ ಸಚಿತ್ರ ವರದಿಯನ್ನು ಬಿಚ್ಚಿಡುತ್ತಾ ಸಾಗುತ್ತದೆ. 
  ಚಿತ್ರದುದ್ದಕ್ಕೂ ಗಮನ ಸೆಳೆಯುವ ಅಂಶವೆಂದರೆ -ಜೀವನಾನುಭವ. ಯಾವೊಂದು ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು, ಮುಂಬೈನ ಸ್ಲಂ ಜಗತ್ತು ಜಮಾಲನಿಗೆ ಕಲಿಸುತ್ತದೆ. ಜೀವನದಲ್ಲಿ ಕಲಿತ ಪಾಠವನ್ನು ಕ್ಲುಪ್ತ ಸಮಯದಲ್ಲಿ ಬಳಸಿಕೊಂಡು, ಹಂತ-ಹಂತವಾಗಿ ಮೇಲೇರುವುದು ಚಿತ್ರದ ಪ್ರಮುಖ ಅಂಶ. ಉಳಿದೆಲ್ಲ ಸ್ಲಂ ಕುರಿತಾದ ಚಿತ್ರಗಳಲ್ಲಿ, ಬರೀ ಸ್ವೇಚ್ಛಾಚಾರವನ್ನೋ ಅಥವಾ ಕಿತ್ತು ತಿನ್ನುವ ಬಡತನವನ್ನೋ, ಅನಕ್ಷರತೆಯನ್ನು ವಿಜೃಂಭಿಸಿದರೆ, ಇಲ್ಲಿ ಸ್ಲಂ ಜಗತ್ತಿನ ಜೀವನಪಾಠವನ್ನೇ ಬಂಡವಾಳ ಮಾಡಿಕೊಂಡ ಚಾಯ್ವಾಲಾ, ಸುಂದರ ಬದುಕೊಂದನ್ನು ಕಟ್ಟಿಕೊಳ್ಳುವ ಪಾಠ, ನಮ್ಮ ಶಿಕ್ಷಣನೀತಿ ರೂಪಿಸುವ ನಾಯಕರಿಗೆ ಮಾದರಿ. ಅಲ್ಲದೇ ಇಂದಿನ ಸ್ಲಂ ಜಗತ್ತಿನೊಳಗೆ ಅಡಗಿರುವ ಅದೆಷ್ಟೋ ಜಮಾಲ್ನಂತ ಪ್ರತಿಭೆಗಳಿಗೆ ಸ್ಲಮ್ಡಾಗ್ ಮಿಲಿಯನೇರ್ ಮಾದರಿಯಾಗಿ, ಸಮಾಜದ ‘ದೇವರಿಗೆ’ ಸ್ಲಂ ಕೆಸರಿನ ‘ಕಮಲಗಳೂ’ ಅರ್ಹ ಎಂಬ ಸಂದೇಶವಂತೂ ಸ್ಫುಟವಾಗಿ ಬಿಂಬಿತವಾಗಿದೆ. ಬದುಕನ್ನ ಅಥರ್ೈಸಿಕೊಳ್ಳುವ ರೀತಿಯಲ್ಲಿ, ಜಮಾಲ ಟೈಟಾನಿಕ್ ಚಿತ್ರದ ಜಾಕ್ನಂತೆ. ಜೀವನದಲ್ಲಿ ಬಂದದನ್ನು ಬಂದಹಾಗೇ ತೆಗೆದುಕೊಂಡು, ..
to me every day counts ಎನ್ನುವ ಶೈಲಿ, ಬೆರಗು ಹುಟ್ಟಿಸುವಂತದ್ದು.
    ಬಹುಷಃ, ಒಂದು ದೃಷ್ಟಿಕೋನದಲ್ಲಿ, ಇಡೀ ಚಿತ್ರವನ್ನು ಬ್ರೆಜಿಲ್ನ ಸಿಟಿ ಆಫ್ ಗಾಡ್ಸ್ನ ಮಾದರಿಯಲ್ಲೇ ತೆಗೆಯಲಾಗಿದ್ದರು, ಸ್ಲಮ್ಡಾಗ್ ಮಿಲಿಯನೇರ್, ಸಿಟಿ ಆಫ್ ಗಾಡ್ಸ್ ತೋರಿಸಿದ ಸ್ಲಂಗಿಂತ, ಅದರೊಳಗಿನ ವಿಭಿನ್ನ ಜಗತ್ತೊಂದನ್ನು ಪರಿಚಯಿಸುತ್ತದೆ. ಜಮಾಲ್ ಮತ್ತು ಸಲೀಮ್ ಜೊತೆಗೆ ಲತಿಕಾ, ಒಂದೇ ಸ್ಲಂನ ಹಿನ್ನೆಲೆ ಹೊಂದಿದ್ದರು, ಮೂರು ಪಾತ್ರಗಳು ವಿಭಿನ್ನ ವ್ಯಕ್ತಿತ್ವಗಳ ಬೆನ್ನು ಹತ್ತಿ ಹೊರಟವರು. ಸಲೀಮನಿಗೆ ವರ್ತಮಾನದ ಚಿಂತೆಯಾದರೆ (ಪ್ರಾಕ್ಟಿಕಲ್), ಜಮಾಲನ ಚಿತ್ತ ಭವಿಷ್ಯದತ್ತ. ಇವೆರಡರ ನಡುವೆ ಅಸ್ಥಿತ್ವ ಮತ್ತು ಪ್ರೀತಿಗಾಗಿ ಹಾತೊರೆಯುವ ಪಾತ್ರ ಲತಿಕಾ. ಆದರೆ ಸಿಟಿ ಆಫ್ ಗಾಡ್ಸ್ ನ ಬಹುತೇಕ ಫ್ರೇಮ್ನಲ್ಲಿ ವಿಜೃಂಭಿಸುವುದು ಹಿಂಸೆ ಮತ್ತು ಕೌರ್ಯ. ಆ ಮಟ್ಟಿಗೆ ಸಮಾಧಾನದ ವಿಷಯವೆಂದರೆ, ನಮ್ಮ ಸ್ಲಂಗಳ ಕತ್ತಲ ಬದುಕನ್ನು ಹಲವು ಹಂತಗಳಲ್ಲಿ ತೋರಿಸಿ ಪ್ರಶಂಸೆ ಗಳಿಸಿದ ಸಲಾಂ ಬಾಂಬೆ ಅಥವಾ ಸಿಟಿ ಆಫ್ ಜಾಯ್ ಚಿತ್ರಗಳಿಗಿಂತ, ಸ್ಲಮ್ಡಾಗ್ ಮಿಲಿಯನೇರ್ ಒಪ್ಪಬಹುದಾದ ಸ್ಲಂ ಪ್ರಪಂಚವನ್ನು ತೋರಿಸಿದೆ. ಇತರೆ ಸ್ಲಂಗಳಲ್ಲಿ ಸಾಮಾನ್ಯವೆನಿಸಬಹುದಾದ ಡ್ರಗ್ಸ್, ಧೂಮಪಾನ, ಕುಡಿತ, ಲೈಂಗಿಕ ಶೋಷಣೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಮುಂಬೈನ ಸ್ಲಂಗಳಲ್ಲಿ ಇದೆಯಾದರೂ, ಅದ್ಯಾವುದು ಚಿತ್ರದಲ್ಲಿ ನೇರವಾಗಿ ಪ್ರಸ್ತಾಪವಾಗಿಲ್ಲ. ಆ ಮಟ್ಟಿಗೆ ಸ್ಲಮ್ಡಾಗ್ ಮಿಲಿಯನೇರ್ ನಮ್ಮ ರೀತಿ-ರಿವಾಜುಗಳನ್ನು ಸರಿ ರೀತಿಯಲ್ಲೇ ಅಥರ್ೈಸಿಕೊಂಡಿದೆ. ಏರ್ಪೋರ್ಟ್ ಪೋಲೀಸರು ಅಟ್ಟಿಸಿಕೊಂಡು ಬರುವಾಗ ತೋರಿಸುವ ಸ್ಲಂನ ಓಣಿಗಳ ಅಚ್ಚುಕಟ್ಟು, ರೈಲುಹಳಿಗಳ ಬದಿಯ ದೋಭಿಘಾಟ್ನ ಸ್ವಚ್ಚ ಪರಿಸರ, ಕಿಷ್ಕಿಂಧೆಯಂತೆ ಕಂಡುಬಂದರೂ, ಕೊಳಕಿಲ್ಲದೆ ಅಚ್ಚುಕಟ್ಟಾಗಿ ಬಿಂಬಿತವಾಗಿವೆ.
     ಇನ್ನು ಭಾರತ 21ನೇ ಶತಮಾನದ ಹೊಸ ಆಥರ್ಿಕ ಸೂಪರ್ ಪವರ್ ಎಂದು ಬಿಂಬಿತವಾಗುತ್ತಿರುವ ಸಮಯದಲ್ಲಿ, ಸ್ಲಮ್ಡಾಗ್ ಮಿಲಿಯನೇರ್ನ ಚಿತ್ರಣ, ಚಿತ್ರಕಥೆ ಭಾರತದ ಸೂಪರ್ ಪವರ್ ಇಮೇಜಿನ ಸಮಗ್ರ ವಿಶ್ಲೇಷಣೆ ಎನ್ನಬಹುದು. ಪಾಶ್ಚಿಮಾತ್ಯ ದೇಶಗಳು, ಕೊಂಚ ಕೌತುಕದಿಂದಲೇ ಪೌರಾತ್ಯ ದೇಶಗಳ ಮುನ್ನಡೆಯನ್ನು ಗಮನಿಸುತ್ತಿರುವ ಸಂದರ್ಭದಲ್ಲಿ, ಭಾರತೀಯರು ಬರೀ ಜೀವನಕ್ರಮದಿಂದಲೇ ಬದುಕಿನ ಸವಾಲುಗಳನ್ನು ಯಾರ ಹಂಗಿಲ್ಲದೇ ನಿಭಾಯಿಸಬಲ್ಲ ಚಾಣಾಕ್ಷರು ಮತ್ತು ತೀರ ನಿಕೃಷ್ಟವೆಂದು ತಳ್ಳಿಹಾಕುವ ಭಾರತದ ಸ್ಲಂಗಳಲ್ಲೂ ಪ್ರತಿಭೆಯ ಭಾರೀ ನಿಕ್ಷೇಪದ ಸದುಪಯೋಗವನ್ನು ಸೂಕ್ಷ್ಮವಾಗಿ ಚಿತ್ರ ಪ್ರಸ್ತಾಪಿಸಿದೆ.
    ಇನ್ನು ಈ ರೀತಿ ತೆಗೆದ ಚಿತ್ರ ಎಂದೇ ಪರಿಗಣಿತವಾಗಿ ಪ್ರಶಸ್ತಿ ಗಳಿಸಿದೆ ಎಂಬ ವಿತಂಡವಾದ ಮಂಡಿಸುವವರು, ಸ್ವಲ್ಪ ಗಮನಿಸಬೇಕಾದ ಅಂಶವೆಂದರೆ, ಇನ್ಯಾವ ರೀತಿಯಲ್ಲಿ ಚಿತ್ರ ತೆಗೆಯಬೇಕಿತ್ತು ಅನ್ನುವುದು. ನಮ್ಮ ಕನ್ನಡ, ಹಿಂದಿ ಭಾಷಾ ಚಿತ್ರಗಳ ಚೆಲ್ಲು,ಚೆಲ್ಲು ಶೈಲಿಯ, ಅಸಂಗತ ಚಿತ್ರಕಥೆಗಳಿಗಿಂತ, ನೈಜತೆ ಮತ್ತು ಸಂದೇಶ ಹೊತ್ತ, ಸ್ಲಮ್ಡಾಗ್ ಮಿಲಿಯನೇರ್ ಅದೆಷ್ಟೋ ಪಾಲು ಮೇಲು. ಟೀನಾ ಮೇಡಮ್ ಹೇಳಿದಂತೆ, ಬಣ್ಣದ ಬಳಕೆಯ ಬಗ್ಗೆ ಹೇಳುವುದಾದರೆ, ಅದೇ ಏಲಿಯಟ್ನ
The Waste Landನ ಮೊದಲ ಕೆಲ ಸಾಲುಗಳು ನೆನಪಿಗೆ ಬರುತ್ತದೆ. ಚಿತ್ರದ ಉದ್ದಕ್ಕೂ ಕಂಡುಬರುವ ಹಳದಿ ಬಣ್ಣವನ್ನು ಅಥೈಸಿಕೊಳ್ಳುವುದಾದರೆ, ಫ್ರಾಯ್ಡ್ನ ಥಿಯರಿ ಸಹಕಾರಿ. ಆತನ ಪ್ರಕಾರ ಹಳದಿ ಒಂದು ರೀತಿಯ ರೋಗಗ್ರಸ್ಥ ಅಥವಾ ಅಸ್ಪಷ್ಟ ಬದುಕಿನ, ನಿರೀಕ್ಷೆಯ ಸಂಕೇತ, ಅದೇರೀತಿ ಆ ಬಣ್ಣವನ್ನು ಬಳಸಿಕೊಳ್ಳಲಾಗಿದೆ.     

dev-and-anil
     ಸ್ಲಂ ಮಕ್ಕಳು ಬರೀ ಕಳ್ಳರು, ಪೋಲಿಗಳು, ಶುಚಿಯಲ್ಲದ ಜೀವನಶೈಲಿ ಹೊಂದಿರುವವರು ಎಂಬ ಬಹುತೇಕ ಭಾರತೀಯರ ಭಾವನೆಯನ್ನು ನಿರಚನೆ ಮಾಡುವ ಹೊಸ ಪ್ರಯೋಗ. But ಇದನ್ನು ಒಪ್ಪಿಕೊಂಡು ಅರಗಿಸಿಕೊಳ್ಳಬೇಕಷ್ಟೆ. ನೆನಪಿರಲಿ-ಸತ್ಯ ಯಾವತ್ತಿದ್ದರೂ ಕಹಿ. ಅದು ಪಾಶ್ಚಾತ್ಯ ನಿದರ್ೇಶಕನ ಮೂಸೆಯಲ್ಲಿ ಬಂದಿದೆಯೊ ಅಥವಾ ನಮ್ಮದೇ ನಿದರ್ೇಶಕರ ಕಲ್ಪನೆಯೋ ಎಂಬುದಕ್ಕಿಂತ, ನಾವು ಕಂಡುಕೊಳ್ಳದ ಹೊಸತನವನ್ನು ತೋರಿಸಿಕೊಟ್ಟದಷ್ಟೇ ಮುಖ್ಯ. ಎಷ್ಟೋ ಭಾರತೀಯ ನಿದರ್ೇಶಕರ Objectionable ಸಿನೆಮಾಗಳಿಗಿಂತ ಇದು ಸಾವಿರ ಪಾಲು ಮೇಲು.
 

January 24, 2009 at 6:38 am 1 comment

ಕವಡೆ ಕಿಮ್ಮತ್ತೂ ಇಲ್ಲದ ದಸರೆಯ ಕಾವಡಿಗಳು, ಮಾವುತರು!

ವಿಶ್ವವಿಖ್ಯಾತ ಜಂಬೂಸವಾರಿ ಖ್ಯಾತಿಯ, ಮೈಸೂರು ದಸರಾ ಆರಂಭಕ್ಕೆ ಕೊನೆಯ ಹಂತದ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಉತ್ಸವದ ಬಗೆಗಿನ ವಾದ-ವಿವಾದಗಳು ದಿನಗಳೆದಂತೆ ಗರಿಗೆದರಿಕೊಳ್ಳುತ್ತಿವೆ. ನಾಡ ಹಬ್ಬದ ಅದ್ದೂರಿ ಮೆರವಣಿಗೆಯ ಕ್ರಮಾಂಕ ಬದಲಾವಣೆಯಿಂದ ಹಿಡಿದು, ದಸರಾ ಉತ್ಸವದ ಉದ್ಘಾಟನೆವರೆಗೂ ಪರ-ವಿರೋಧದ ಚಚರ್ೆ ಅಲೆ,ಅಲೆಯಾಗಿ ತೇಲಿ ಬರುತ್ತಿದೆ. ಆದರೆ ಉತ್ಸವದ ಆನೆಗಳ ಮಾವುತರು ಮತ್ತು ಕಾವಡಿಗಳ ಅರಣ್ಯರೋದನ, ಉಳಿದೆಲ್ಲ ವಿಷಯಗಳಿಗಿಂತ ಮತ್ತು ಮಾನವೀಯತೆ ದೃಷ್ಟಿಯಿಂದ, ಈ ಬಾರಿಯ ದಸರಾ ಸಿದ್ಧತೆಯಲ್ಲಿ ನಾಡಿನ ಗಮನ ಸೆಳೆದ ಅಂಶ. ಭೂ ಗ್ರಹದ ಮೇಲಿನ ಪಸ್ತುತ ಜೀವಿಗಳಲ್ಲೇ ಅತ್ಯಂತ ದೈತ್ಯವೆನಿಸಿರುವ ಆನೆಗಳನ್ನು ಹಿಡಿದು ಪಳಗಿಸಿ, ಐತಿಹಾಸಿಕ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮಾಡುವ ಮಾವುತರು, ಕಾವಡಿಗಳಿಗೆ ಬದುಕು ನಡೆಸುವುದೇ ದುಸ್ತರವೆನಿಸಿಬಿಟ್ಟಿದೆ ಕಳೆದ ಕೆಲ ವರ್ಷಗಳಿಂದ.
   ಹೆಸರಿಗೆ ಸಕರ್ಾರದ ಅರಣ್ಯ ಇಲಾಖೆಯ ಆನೆಗಳ ಯೋಗಕ್ಷೇಮ ನೋಡಿಕೊಳ್ಳುವ ಮಾವುತರು-ಕಾವಡಿಗಳಿಗೆ, ತಮ್ಮ ಜೀವನದ ಯೋಗಕ್ಷೇಮ ವಿಚಾರಿಸುವವರೇ ಇಲ್ಲದಂತಾಗಿದೆ. ಹಲವು ವರ್ಷಗಳಿಂದ, ಮಾಡುವ ಕೆಲಸಕ್ಕೆ ಸಂಬಳವಿಲ್ಲದಿದ್ದರೂ ಸೌಮ್ಯವಾಗಿಯೇ ಕಾರ್ಯ ನಿರ್ವಹಿಸುತ್ತಾ, ನಾಡಹಬ್ಬಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದ ಮಾವುತರು, ಯಾವಾಗ ಜೀವನ ನಡೆಸುವುದೇ ಕಷ್ಟವೆನಿಸಿತೋ, ಆಗ ಆನೆ ತಿವಿಯುವ ಅಂಕುಶವನ್ನು, ಕುಂಭಕರ್ಣ ನಿದ್ದೆಯಲ್ಲಿದ್ದ ಸಕರ್ಾರದ ವಿರುದ್ಧ ಹಿಡಿದು ನಿಂತರು. ನಿತ್ಯವೂ ಜೊತೆಯಲ್ಲೇ ಕಾರ್ಯ ನಿರ್ವಹಿಸುತ್ತಾ, ಇವರ ಕಷ್ಟಗಳನ್ನು ಕಂಡೂ ಕಾಣದಂತೆ ವತರ್ಿಸುತ್ತಿದ್ದ ಅರಣ್ಯಾಧಿಕಾರಿಗಳ ವಿರುದ್ಧ, ಈ ಬಾರಿ ಸಾಂಪ್ರದಾಯಿಕ ‘ಗಜಪಯಣದ’ ಸಂದರ್ಭದಲ್ಲಿ ಸಿಡಿದೆದ್ದರು. ಕಾಡಿನ ಕೆಲ ಆದಿವಾಸಿ ಗುಂಪುಗೊಳಗೂಡಿ ನಾಗರಹೊಳೆ ಅರಣ್ಯದಿಂದ ಆರಂಭವಾಗುವ ಪಯಣವನ್ನೇ ಬಹಿಷ್ಕರಿಸುವ ಬೆದರಿಕೆಯನ್ನೂ ಒಡ್ಡಿದರು.
    ಅಲ್ಲಿವರೆಗೂ, ಮಾವುತರು-ಕಾವಡಿಗಳೆಂದರೆ ಬರೀ ಚಿಲ್ಲರೆ ಕಾಸಿಗಾಗಿ, ನಗರದ ಮಕ್ಕಳುಗಳನ್ನು ಆನೆಯ ಬೆನ್ನ ಮೇಲೆ ಹೊರಿಸಿ ಕೂಸುಮರಿ ಮಾಡಿಸುವ ಜೋಕರ್ಗಳಂತೆ ಕಾಣುತ್ತಿದ್ದ, ನಗರ ಭಾಗದ ಜನರೂ ಅವರ ದುರ್ಬರ ಬದುಕಿನ ಬಗ್ಗೆ ಮನಗಂಡು ಸಕರ್ಾರಕ್ಕೆ ಹಿಡಿಶಾಪ ಹಾಕತೊಡಗಿದಾಗ, ಅಧಿಕಾರಿಗಳು ಎಚ್ಚೆತ್ತುಕೊಂಡರು. ನಾಡಹಬ್ಬದ ಪ್ರಮುಖ ಆಕರ್ಷಣೆಯ ಹಿತರಕ್ಷಣೆಗಾಗಿ, ಕಾರಣಾಂತರಗಳಿಂದ ತಡೆಹಿಡಿಯಲಾಗಿದ್ದ ಮಾವುತರ ಸಂಬಳ ಬಿಡುಗಡೆಗೆ ಸಕರ್ಾರ ಹಸಿರು ನಿಶಾನೆ ತೋರಿಸಿತು. ಗಜಪಯಣದ ಹಿನ್ನೆಲೆಯಲ್ಲಿ, ಆಸಕ್ತ ಮಾಧ್ಯಮ ಮಿತ್ರರೊಂದಿಗೆ, ನೊಂದ ಮಾವುತರು-ಕಾವಡಿಗಳು ದಸರೆಯ ಇನ್ನೊಂದು ಮಗ್ಗುಲನ್ನು ಅನಾವರಣಗೊಳಿಸುತ್ತಿದ್ದರು.
“ಇಲಾಖೆಯಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿರುವ ನಮಗೆ ದಿನವೊಂದಕ್ಕೆ 100 ರೂ ಭತ್ಯೆ ನೀಡಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ಆ ಭತ್ಯೆಗೂ ತತ್ವಾರ ಬಂದೊದಗಿದೆ. ಆದರೆ ಇದೀಗ ದಸರೆ ಆರಂಭವಾಗುತ್ತಿದಂತೆ, ಅರಣ್ಯಾಧಿಕಾರಿಗಳು ಒಂದು ರೀತಿಯಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದಸರೆಗೆ ಹೊರಡುತ್ತಿರುವ ಮಾವುತ-ಕಾವಡಿಗಳ ಸಂಬಳವನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ,” ಎಂದರು ನೊಂದ ಕಾವಡಿಯೊಬ್ಬರು. ಪಯಣದ ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಕರಂದ್ಲಾಜೆ ಮೇಡಮ್ ಬರುವ ಹೊತ್ತಿಗೆ, ಮಾವುತರ ಪ್ರತಿಭಟನೆಯ ಕಾವು ತಟ್ಟಿದ ಅಧಿಕಾರಿಗಳು, ಅಲ್ಲಿನ ಸಂಸದರ ಸಮ್ಮುಖದಲ್ಲೇ ಬಿಡುಗಡೆಯಾಗಿ ಬಂದಿರುವ 3.5 ಲಕ್ಷ ಅನುದಾನದಲ್ಲಿ ಸಂಬಳ ನೀಡಲಾಗುವುದೆಂದು ಘೋಷಿಸಿದರು. ಬರೀ ಘೋಷಣೆಗೆ ಜಗ್ಗದ ಮಾವುತರು, ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ರವರ ಮಧ್ಯಸ್ಥಿಕೆಯಿಂದಾಗಿ, ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
  ಕೇವಲ ಈ ಬಾರಿಯಷ್ಟೇ ತಾರಕಕ್ಕೇರಿದ ಮಾವುತರ-ಕಾವಡಿಗಳ ಪ್ರತಿಭಟನೆ, ಹೊಸದೇನಲ್ಲ. ಕಳೆದ ಕೆಲ ವರ್ಷಗಳಿಂದ ಚಚರ್ೆಗೆ ಗ್ರಾಸವಾಗುತ್ತಲೇ ಬಂದಿರುವ ಮಾವುತರ ಬವಣೆಗೆ ಆನೆಗಳಷ್ಟೇ ವಯಸ್ಸೂ ಆಗಿದೆ! ಒಂದು ಲೆಕ್ಕದ ಪ್ರಕಾರ ಇದೀಗ ಇಲಾಖೆಯ ಆನೆ ಶಿಬಿರಗಳಲ್ಲಿ ಅಂದಾಜು 200 ಪಳಗಿಸಿದ ಆನೆಗಳು ಆಶ್ರಯ ಪಡೆದಿವೆ. ಲೆಕ್ಕದ ಪ್ರಕಾರ ಒಂದು ಆನೆಗೆ ಒಬ್ಬ ಮಾವುತ ಮತ್ತು ಅವನ ಸಹಾಯಕ್ಕೆ ಒಬ್ಬ ಕಾವಡಿಯ ಅವಶ್ಯಕತೆಯಿದೆ. ಆದರೆ, ಐತಿಹಾಸಿಕ ‘ಖೆಡ್ಡಾ’ ಕಾಯರ್ಾಚರಣೆಯ ನಿಷೇಧದ ನಂತರ, ಮಾವುತರ ನೇಮಕಾತಿಯನ್ನು ಕೆಲಮಿತಿಯವರೆಗೆ ನಿಲ್ಲಿಸಿದ ಸಕರ್ಾರ, ಈಗ ಕಾರ್ಯನಿರ್ವಹಿಸುತ್ತಿರುವ ಮಾವುತರನ್ನು-ಕಾವಡಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿತ್ತು. ಅಲ್ಲದೆ, ಮಾವುತರಾಗಿ ನೇಮಕಗೊಂಡ ಎಲ್ಲರೂ ಕಾಡಿನ ಆದಿವಾಸಿ ಗುಂಪುಗಳಿಗೆ ಸೇರಿದವರು ಇಲ್ಲವೇ ಕಾಡಿನಂಚಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಗಿರಿ ಜನರು ಮೈಸೂರಿನ ಕಾಡುಗಳಲ್ಲಿ ಮಾವುತರಾಗಿ ಸೇರಿಕೊಂಡರೆ, ಮುಸ್ಲಿಮರು ಶಿವಮೊಗ್ಗ,ಕೊಡಗಿನ ಕಾಡುಗಳಲ್ಲಿ ಮಾವುತರಾಗಿ ಇಲಾಖೆ ಸೇರಿದರು.
  ಹುಟ್ಟಿನಿಂದಲೇ ಆನೆ ಪಳಗಿಸುವ ವಿದ್ಯೆ ಕಲಿಯುವ ಗಿರಿಜನರು, ಆನೆಗಳ ನಿತ್ಯದ ಒಡನಾಟದಿಂದ ತಾವು ಕಲಿತ ವಿದ್ಯೆಯನ್ನು ಹಾಗೆಯೇ ತಮ್ಮ ಮಕ್ಕಳಿಗೂ ಮಾತಿಗಿಂತ ಮುಂಚೆಯೇ ಕಲಿಸಿಬಿಡುತ್ತಾರೆ ಮಾವುತರು. ಹಾಗಾಗಿ ಮಾವುತರ ಕೆಲಸ ಇವರಿಗೇ ಕಟ್ಟಿಟ್ಟ ಬುತ್ತಿ. ಆದರೆ ಇದೀಗ 37 ಜನ ಮಾವುತರ ಸೇವೆಯನ್ನು ಖಾಯಂ ಮಾಡುವ ನಿಧರ್ಾರ ತಳೆದಿರುವ ಯಡಿಯೂರಪ್ಪ ಸಕರ್ಾರ, ಬಳಲಿದ್ದ ಮಾವುತರ-ಕಾವಡಿಗಳ ಬದುಕಿಗೆ ನೆಮ್ಮದಿ ತಂದೊಡ್ಡಿದೆ.

ಬಲರಾಮ
ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನವನ (ನಾಗರಹೊಳೆ) ವ್ಯಾಪ್ತಿಯ ಮತಿಗೋಡು ಆನೆ ಶಿಬಿರದ ನಿವಾಸಿ 50 ವರ್ಷದ ಬಲರಾಮನನ್ನು 1987ರಲ್ಲಿ ಕಟ್ಟೆಪುರ ಅರಣ್ಯದಲ್ಲಿ ಸೆರೆ ಹಿಡಿಯಲಾಯಿತು. ಕಳೆದ 14 ವರ್ಷಗಳಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರು ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಬಲರಾಮ 1999ರಿಂದ, ಮೆರವಣಿಗೆಯ ಮುಖ್ಯ ಭಾಗವಾದ ಅಂಬಾರಿಯನ್ನು ಹೊರುತ್ತಿದ್ದಾನೆ.
ಅಭಿಮನ್ಯು
42 ವರ್ಷದ ಅಭಿಮನ್ಯುವನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ಇದೀಗ ನಾಗರಹೊಳೆಯ ಮೂರ್ಕಲ್ ಆನೆ ಶಿಬಿರದಲ್ಲಿರುವ ಅಭಿಮನ್ಯು ಕಳೆದ 10 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಾ, ಸಾಂಪ್ರದಾಯಿಕ ‘ಆನೆಗಾಡಿ’ ಎಳೆಯುವ ಜವಾಬ್ದಾರಿ ಹೊತ್ತಿದ್ದಾನೆ.
ವಿಜಯ
1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ ನಂತರ ದುಬಾರೆ ಆನೆ ಶಿಬಿರದಲ್ಲೇ ವಾಸವಾಗಿರುವ ಸೌಮ್ಯ ಸ್ವಭಾವದ 51 ವರ್ಷದ ಹೆಣ್ಣಾನೆ ವಿಜಯ ಕಳೆದ ಐದು ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ.
ಗಜೇಂದ್ರ
ಕಳೆದ 12 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 53 ವರ್ಷದ ಗಜೇಂದ್ರನನ್ನು ನಾಗರಹೊಳೆಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಅಜರ್ುನ
ಒಂದೇ ಒಂದು ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ 47 ವರ್ಷದ ಅಜರ್ುನನ್ನು ಕೊಡಗಿನ ಹೆಬ್ಬಳ್ಳ ಅರಣ್ಯದಲ್ಲಿ 1969ರಲ್ಲಿ ಹಿಡಿಯಲಾಗಿತ್ತು. ಬಾಳ್ಳೆ ಆನೆ ಶಿಬಿರದ ನಿವಾಸಿ ಅಜರ್ುನ ಕಳೆದ ಏಳು ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದಾನೆ.
ಸರಳ
ನಾಗರಹೊಳೆಯ ಸುಂಕದಕಟ್ಟೆ ಆನೆ ಶಿಬಿರದ ಸರಳಳನ್ನು 1977 ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಹಿಡಿಯಲಾಗಿತ್ತು. ದಸರೆಯ ಆನೆಗಳಲ್ಲೇ ಅತ್ಯಂತ ಜೂನಿಯರ್ ಎನಿಸಿರುವ ಸರಳ ಕಳೆದ 4 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದಾಳೆ.

September 5, 2008 at 2:46 pm Leave a comment

‘ಕೃಷ್ಣನಾ ಕೊಳಲಿನಾ…’

ಪ್ರೇಮಕ್ಕೆ ಪಲ್ಲವಿ ಬರೆದ ರಾಧೆಯ ಕೃಷ್ಣ,
ರಾಜಕಾರಣಕ್ಕೆ ಹೊಸ ತಂತ್ರ ಕಲಿಸಿದ ಮಥುರೆಯ ಕೃಷ್ಣ,
ಕಂಸ ಚಾರುನರಿಗೆ ಧರ್ಮದ ಗುದ್ದು ಕೊಟ್ಟ ಗೊಲ್ಲ ಕೃಷ್ಣ,
ಬೆಣ್ಣೆ ಕದ್ದು, ಪ್ರೀತಿ ಕದ್ದು, ಸುಧಾಮನ ಅವಲಕ್ಕಿ ಮೆದ್ದು,
ಗರ್ಭ ಗುಡಿಯ ಕತ್ತಲೆಯೊಳಗೆ ಪ್ರೀತಿ-ಧರ್ಮದ ಬೆಳಕು ಸೂಸುವ ಕನಕನ ಕೃಷ್ಣ,
ಈ ಅಷ್ಟಮಿಯ ಸಂದರ್ಭದಲ್ಲಿ, ನಿನಗೆ ನೂರು ನಮನ.
ಶೂನ್ಯದಲ್ಲಿ ಶಬ್ದ ಹುಟ್ಟುವ ನಿನ್ನ ವಂಶಿಯ ನಾದ, ಬ್ರಹ್ಮಾಂಡವನ್ನು ಸುಸ್ಥಿತಿಯಲ್ಲಿರಿಸಲಿ.

August 24, 2008 at 2:29 pm Leave a comment

ಸುದ್ದಿಯ ಸ್ವಾದಕ್ಕಾಗಿ ಕಾಫಿ ಬಾರಿಗೆ ಬನ್ನಿ

ಕ್ಷಿತಿಜದ ಮೇಲೆ ಹಾರಾಡುವ ಗಾಳಿಪಟವ ನೋಡಿದ ಹುಡುಗ
ತನಗಿಲ್ಲದ್ದಕ್ಕೆ ಮರುಗುತ್ತಾ ನಿಂತಿರಲು,
ಫಳ್ಳನೆ ಎಳೆಬಿಸಿಲು ಹೊಳೆದು
ಜಂಗಿನುಲಿಯ ಮುದಿ ಜಂಗಮ ಬಂದ
ಬಾರೋ ಹುಡುಗ ಅಂದ,
ಬಂದರೆ ಮೊರದಗಲ ಅಂಗೈಯಲ್ಲಿದ್ದ ಬೇರೆ
ಗಾಳಿಪಟ ಕೊಟ್ಟು
ಹಾರಿಸೋ ಕಂದ
ಅದು ಹಾರುವಷ್ಟು ಆಕಾಶ ನಿಂದೇ ಅಂದ,
ಅಂದು ಮಾಯವಾದ.
ಆ ಮುದಿ ಜಂಗಮ ಯಾರೆಂದಿರಿ?
ಸಾವಳಗಿ ಶಿವಲಿಂಗ!
ನಾನೇ ಆ ಹುಡುಗ.

ಸುಮ್ಮನೆ ಕನ್ನಡದ ಬ್ಲಾಗ್ಗಳನ್ನು ಓದುತ್ತಾ ಇದ್ದವನಿಗೆ ನಿಂದೂ ಒಂದು ಬ್ಲಾಗ್ ಮಾಡು ಅಂದವನು ಮಂಗಳೂರಿನ ಗೆಳೆಯ ವೇಣುವಿನೋದ. ಆದಕ್ಕೆ ಟೆಕ್ನಿಕಲ್ ಬೆಂಬಲ ಕೊಟ್ಟವನು ಮಾಜಿ ರೂಮ್ಮೇಟ್ ಕುಮಾರ್. ಆದರೂ ಅಳುಕಿನಿಂದಲೇ ಕನ್ನಡದಲ್ಲಿ ಬ್ಲಾಗ್ ಬರೆಯೋಕೆ ಶುರು ಹಚ್ಚಿಕೊಳ್ಳುವಾಗ ಚಂದ್ರಶೇಖರ ಕಂಬಾರರ ಮೇಲಿನ ಪದ್ಯ ಬೆಟ್ಟದಷ್ಟು ಧೈರ್ಯ ತಂದೊಡ್ಡುತ್ತಿದೆ. ವರದಿಗಾರನಾಗಿ, ಜಂಗಮನಂತೆ ಸಂಚಾರಿಯಾಗಿ, ಓದಿಕೊಂಡ, ಕೇಳಿದ ಮತ್ತು ಕಂಡ ವಿಷಯಗಳ ಚಚರ್ೆ ಈ ಕಾಫಿಬಾರ್ನಲ್ಲಿ. ಇತಿಹಾಸದ ಪ್ರಕಾರ, ಕಾಫಿಬಾರ್ ಮತ್ತು ಕ್ಷೌರಿಕರ ಸಲೂನ್ಗಳು ಮಾಹಿತಿ ಸಂವಹನಕ್ಕೆ ಹೇಳಿಮಾಡಿಸಿದ ಜಾಗಗಳು. ಅಂತಹುದೇ ಕಾಫಿಬಾರ್ಗಳ ಪ್ರತಿಮೆ ಈ ಕಾಫಿಬಾರ್ ಕೂಡ ಮತ್ತು ಎಲ್ಲ ಲೈಟ್-ಸ್ಟ್ರಾಂಗ್ ವಿಷಯಗಳ ಸಂಗಮ. ಕಾಫಿಬಾರ್ ಅಂದೊಡನೆ ಹಿಂದೆ ಕಾಲೇಜಿನ ದಿನಗಳಲ್ಲಿ ರಸ್ತೆ ಬದಿಯ ಕಾಕ ಹೋಟೆಲಿನಲ್ಲಿ ಸಾಲ ಬರೆಸಿಯೋ ಅಥವಾ ಗೆಳೆಯರ ಲೆಕ್ಕದಲ್ಲೋ ಬೈಟು ಕಾಫಿ ಕುಡಿಯುತ್ತಾ ‘ಗುರೂ ನಾಳೆ ಫಸ್ಟ್ ಡೇ ಫಸ್ಟ್ ಷೋ ನೋಡ್ಲೇಬೇಕಮ್ಮ, ಆ ಟಕ್ಲು ನನ್ಮಗನ ಕ್ಲಾಸು ಏನು ಬೋರ್ ಹೊಡಿತಿತ್ತು ಮಾರಾಯ, ಮಗ, ಈ ಬೈಕ್ ಹೆಂಗಮಾ? ಇಂತ ಹತ್ತು ಹಲವು ವಿಷಯಗಳ ಫ್ಲಾಷ್ಬ್ಯಾಕ್ ಮಿಂಚಿ ಮಾಯವಾಗುತ್ತದೆ. ಅಂತಹುದೇ ನೈಜ ವಿಷಯಗಳ ನೇರ ಝಲಕ್ ಈ ಕಾಫಿಬಾರ್ನಲ್ಲಿ�

August 17, 2008 at 11:25 am 1 comment

Hello world!

Welcome to WordPress.com. This is your first post. Edit or delete it and start blogging!

November 20, 2007 at 4:03 pm Leave a comment


 

January 2012
S M T W T F S
« Apr    
1234567
891011121314
15161718192021
22232425262728
293031  

Recent Posts

Blog Stats

  • 906 hits

Follow

Get every new post delivered to your Inbox.